Saturday, October 16, 2010

~ ओं मह प्राणदीपं~ साहित्य

शलोक:  ओं मह प्राणदीपं (साहित्य)
चित्र : श्री मंजुनाथ (कन्नड़)

ओं मह प्राणदीपं शिवं शिवं
महोंकार रूपं शिवं शिवं
मह सूर्य चंद्रादि नेत्रं पवित्रं
मह गाढ तिमिरांतकंसौरगात्रं
मह कांति बीजं मह दिव्य तेजं
भवनी समेतम् भजॆ मंजुनाथं
 
ओं......
नमः शंकरायच मयस्करायच
नमः शिवायच शिवतरायच भवहरायच
 
महप्राण दीपं शिवं शिवं
भजॆ मंजुनाथं शिवं शिवं
 
अद्वैत भास्करं अर्धनारीश्वरं
हृदुश हृदयंगमं चतुर्विध दिशंगमं
पंचभूतात्मकं शट्‍शत्रुनाशकं
सप्तस्वरेश्वरं अष्टसिद्धीश्वरं
नवरस मनोहरं
दश दिशासुविमलं
एकादशोज्वलम् एकनाथेश्वरं
प्रस्तुतिवशंकरं प्रणथ जन किंकरं
दुर्जन भयंकरं सज्जन शुभंकरं
भ्राणिभव तारकं प्रकृति हित कारकं
भुवन भव्य भवनायकं भाग्यात्मकं रक्षकं
 
ईशं सुरेशं ऋशेशं परेशं
नटेशं गौरीशं गणेशं भूतेशं
मह मधुर पंचाक्षरी मंत्र मार्षं
मह हर्ष वर्ष
प्रवर्षं सुशीक्षं
 
ओं.... नमो हरायच स्वर हरायच पुर हरायच
रुद्रायच भद्रायच इंद्रायच नित्यायच निर् निद्रायच
 
महप्राण दीपं शिवं शिवं
भजॆ मंजुनाथं शिवं शिवं
 
डं डं ड डं डं ड डड्ढा निनाद नव तांडवाडंबरं
तधिम्मि तकधिम्मि धिदिम्मि धिमिधिम्मि संगीत
साहित्य सुम कमल वंबरं
ऒंकार ह्रींकार श्रींकार ह्रैंकार मंत्र बीजाक्षरं मंजुनाथेश्वरं
 
ऋग्वेद माद्यम् यजुर्वेद वेद्यम् साम प्रगीतं अथर्व
प्रभातं पुराणेतिहास प्रसिद्धं विषुद्धं
प्रपंचैक सूत्रं विभुद्धं सुसिद्धं
 
न कारं म कारं सि कारं ब कारं य कारं निराकार
साकार सारं महा काल कालं महा नीलकंठं
महा नंद नंदं महात्ताटहासं जटा जूट रंगैक गंगा
सुचित्रं ज्वलद् मुद्‌गणेत्रं सुमित्रं सुगोत्रं
महकाश भासम् महा भानु लिंगं.....
 
महा वस्तु वर्णं सुवर्णं प्रवर्णं...
सौराष्ट्र सुंदरं सौमनाथेश्वरं
श्रीशैल मंदिरं श्रीमल्लिकार्जुनं
उज्जयिनिपुर महा काळेश्वरं
वैद्यनाथेश्वरं महा भीमॆश्वरं
अमर लिंगेश्वरं भाम लिंगेश्वरं
काशि विश्वेश्वरं परं घ्रिष्मेश्वरं
त्र्यंबकाधीश्वरं नागलिंगेश्वरं
श्री.... केदारलिंगेश्वरं....
अग्निलिंगात्मकं ज्योतिलिंगात्मकं
वायुलिंगात्मकं आत्मलिंगात्मकं
अखिललिंगात्मकम् अग्निसोमात्मकं...
अनादिं अमेयं अजेयं अचिंत्यं अमोघं अपूर्वं अनंतं अखंडं २ (२ने बारि वेग)
धर्मस्थळ क्षेत्र वर परज्योतिं......३
 
ओं...... नमः सोमायच सौम्यायच भव्यायच भाग्यायच
शांतायच शौर्यायच योगायच भोगायच कालायच
कांतायच रम्यायच गम्यायच ईशायच श्रीशायच
शर्वायच सर्वाय-च.....

ಓಂ ಮಹ ಪ್ರಾಣದೀಪಂ (ಸಾಹಿತ್ಯ)

ಶ್ಲೋಕ: ಓಂ ಮಹ ಪ್ರಾಣದೀಪಂ (ಸಾಹಿತ್ಯ)
ಚಿತ್ರ: ಶ್ರೀ ಮಂಜುನಾಥ (ಕನ್ನಡ)

~ ಓಂ ಮಹ ಪ್ರಾಣದೀಪಂ~
 
ಓಂ ಮಹ ಪ್ರಾಣದೀಪಂ ಶಿವಂ ಶಿವಂ
ಮಹೋಂಕಾರ ರೂಪಂ ಶಿವಂ ಶಿವಂ
ಮಹ ಸೂರ್ಯ ಚಂದ್ರಾದಿ ನೇತ್ರಂ ಪವಿತ್ರಂ
ಮಹ ಗಾಢ ತಿಮಿರಾಂತಕಂಸೌರಗಾತ್ರಂ
ಮಹ ಕಾಂತಿ ಬೀಜಂ ಮಹ ದಿವ್ಯ ತೇಜಂ
ಭವನೀ ಸಮೇತಮ್ ಭಜೆ ಮಂಜುನಾಥಂ
 
ಓಂ......
ನಮಃ ಶಂಕರಾಯಚ ಮಯಸ್ಕರಾಯಚ
ನಮಃ ಶಿವಾಯಚ ಶಿವತರಾಯಚ ಭವಹರಾಯಚ
 
ಮಹಪ್ರಾಣ ದೀಪಂ ಶಿವಂ ಶಿವಂ
ಭಜೆ ಮಂಜುನಾಥಂ ಶಿವಂ ಶಿವಂ
 
ಅದ್ವೈತ ಭಾಸ್ಕರಂ ಅರ್ಧನಾರೀಶ್ವರಂ
ಹೃದುಶ ಹೃದಯಂಗಮಂ ಚತುರ್ವಿಧ ದಿಶಂಗಮಂ
ಪಂಚಭೂತಾತ್ಮಕಂ ಶಟ್‍ಶತ್ರುನಾಶಕಂ
ಸಪ್ತಸ್ವರೇಶ್ವರಂ ಅಷ್ಟಸಿದ್ಧೀಶ್ವರಂ
ನವರಸ ಮನೋಹರಂ
ದಶ ದಿಶಾಸುವಿಮಲಂ
ಏಕಾದಶೋಜ್ವಲಮ್ ಏಕನಾಥೇಶ್ವರಂ
ಪ್ರಸ್ತುತಿವಶಂಕರಂ ಪ್ರಣಥ ಜನ ಕಿಂಕರಂ
ದುರ್ಜನ ಭಯಂಕರಂ ಸಜ್ಜನ ಶುಭಂಕರಂ
ಭ್ರಾಣಿಭವ ತಾರಕಂ ಪ್ರಕೃತಿ ಹಿತ ಕಾರಕಂ
ಭುವನ ಭವ್ಯ ಭವನಾಯಕಂ ಭಾಗ್ಯಾತ್ಮಕಂ ರಕ್ಷಕಂ
 
ಈಶಂ ಸುರೇಶಂ ಋಶೇಶಂ ಪರೇಶಂ
ನಟೇಶಂ ಗೌರೀಶಂ ಗಣೇಶಂ ಭೂತೇಶಂ
ಮಹ ಮಧುರ ಪಂಚಾಕ್ಷರೀ ಮಂತ್ರ ಮಾರ್ಷಂ
ಮಹ ಹರ್ಷ ವರ್ಷ
ಪ್ರವರ್ಷಂ ಸುಶೀಕ್ಷಂ
 
ಓಂ.... ನಮೋ ಹರಾಯಚ ಸ್ವರ ಹರಾಯಚ ಪುರ ಹರಾಯಚ
ರುದ್ರಾಯಚ ಭದ್ರಾಯಚ ಇಂದ್ರಾಯಚ ನಿತ್ಯಾಯಚ ನಿರ್ ನಿದ್ರಾಯಚ
 
ಮಹಪ್ರಾಣ ದೀಪಂ ಶಿವಂ ಶಿವಂ
ಭಜೆ ಮಂಜುನಾಥಂ ಶಿವಂ ಶಿವಂ
 
ಡಂ ಡಂ ಡ ಡಂ ಡಂ ಡ ಡಡ್ಢಾ ನಿನಾದ ನವ ತಾಂಡವಾಡಂಬರಂ
ತಧಿಮ್ಮಿ ತಕಧಿಮ್ಮಿ ಧಿದಿಮ್ಮಿ ಧಿಮಿಧಿಮ್ಮಿ ಸಂಗೀತ
ಸಾಹಿತ್ಯ ಸುಮ ಕಮಲ ವಂಬರಂ
ಒಂಕಾರ ಹ್ರೀಂಕಾರ ಶ್ರೀಂಕಾರ ಹ್ರೈಂಕಾರ ಮಂತ್ರ ಬೀಜಾಕ್ಷರಂ ಮಂಜುನಾಥೇಶ್ವರಂ
 
ಋಗ್ವೇದ ಮಾದ್ಯಮ್ ಯಜುರ್ವೇದ ವೇದ್ಯಮ್ ಸಾಮ ಪ್ರಗೀತಂ ಅಥರ್ವ
ಪ್ರಭಾತಂ ಪುರಾಣೇತಿಹಾಸ ಪ್ರಸಿದ್ಧಂ ವಿಷುದ್ಧಂ
ಪ್ರಪಂಚೈಕ ಸೂತ್ರಂ ವಿಭುದ್ಧಂ ಸುಸಿದ್ಧಂ
 
ನ ಕಾರಂ ಮ ಕಾರಂ ಸಿ ಕಾರಂ ಬ ಕಾರಂ ಯ ಕಾರಂ ನಿರಾಕಾರ
ಸಾಕಾರ ಸಾರಂ ಮಹಾ ಕಾಲ ಕಾಲಂ ಮಹಾ ನೀಲಕಂಠಂ
ಮಹಾ ನಂದ ನಂದಂ ಮಹಾತ್ತಾಟಹಾಸಂ ಜಟಾ ಜೂಟ ರಂಗೈಕ ಗಂಗಾ
ಸುಚಿತ್ರಂ ಜ್ವಲದ್ ಮುದ್‌ಗಣೇತ್ರಂ ಸುಮಿತ್ರಂ ಸುಗೋತ್ರಂ
ಮಹಕಾಶ ಭಾಸಮ್ ಮಹಾ ಭಾನು ಲಿಂಗಂ.....
 
ಮಹಾ ವಸ್ತು ವರ್ಣಂ ಸುವರ್ಣಂ ಪ್ರವರ್ಣಂ...
ಸೌರಾಷ್ಟ್ರ ಸುಂದರಂ ಸೌಮನಾಥೇಶ್ವರಂ
ಶ್ರೀಶೈಲ ಮಂದಿರಂ ಶ್ರೀಮಲ್ಲಿಕಾರ್ಜುನಂ
ಉಜ್ಜಯಿನಿಪುರ ಮಹಾ ಕಾಳೇಶ್ವರಂ
ವೈದ್ಯನಾಥೇಶ್ವರಂ ಮಹಾ ಭೀಮೆಶ್ವರಂ
ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ
ಕಾಶಿ ವಿಶ್ವೇಶ್ವರಂ ಪರಂ ಘ್ರಿಷ್ಮೇಶ್ವರಂ
ತ್ರ್ಯಂಬಕಾಧೀಶ್ವರಂ ನಾಗಲಿಂಗೇಶ್ವರಂ
ಶ್ರೀ.... ಕೇದಾರಲಿಂಗೇಶ್ವರಂ....
ಅಗ್ನಿಲಿಂಗಾತ್ಮಕಂ ಜ್ಯೋತಿಲಿಂಗಾತ್ಮಕಂ
ವಾಯುಲಿಂಗಾತ್ಮಕಂ ಆತ್ಮಲಿಂಗಾತ್ಮಕಂ
ಅಖಿಲಲಿಂಗಾತ್ಮಕಮ್ ಅಗ್ನಿಸೋಮಾತ್ಮಕಂ...
ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ ೨ (೨ನೇ ಬಾರಿ ವೇಗ)
ಧರ್ಮಸ್ಥಳ ಕ್ಷೇತ್ರ ವರ ಪರಜ್ಯೋತಿಂ......೩
 
ಓಂ...... ನಮಃ ಸೋಮಾಯಚ ಸೌಮ್ಯಾಯಚ ಭವ್ಯಾಯಚ ಭಾಗ್ಯಾಯಚ
ಶಾಂತಾಯಚ ಶೌರ್ಯಾಯಚ ಯೋಗಾಯಚ ಭೋಗಾಯಚ ಕಾಲಾಯಚ
ಕಾಂತಾಯಚ ರಮ್ಯಾಯಚ ಗಮ್ಯಾಯಚ ಈಶಾಯಚ ಶ್ರೀಶಾಯಚ
ಶರ್ವಾಯಚ ಸರ್ವಾಯ-ಚ....

Friday, June 4, 2010

04/06/2010 vijaya karnataka ala-nirala lekhanada vimarshe

 ನಮಸ್ಕಾರ,
ಇಂದಿನ ಆಳ-ನಿರಾಳ ಲೇಖನವು ಆಳವಾಗಿಯೂ, ಹಾಗು ಸ್ವಲ್ಪ ನಿರಾಳವನ್ನೂ ತಂದಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ನನಗೂ ಸಹ ನಿಮ್ಮಂತೆಯೇ ಅನಿಸಿಕೆಗಳು ಇರುವುದರಿಂದ ಈ ಲೇಖನ ನನಗೆ ಬಹಳ ಹತ್ತಿರವಾಯಿತು. ಇಂದಿನ ಲೇಖನದಿಂದ ಸ್ವಲ್ಪ ಆಘಾತವು ಆಗಿದೆ ಏಕೆಂದರೆ ಮಹಾಪ್ರಾಣಗಳನ್ನು,ಋ ಮತ್ತು ಷ ಕಾರಗಳನ್ನು  ಕನ್ನಡದಿಂದ ತೆಗೆಯಲು ನಡೆಯುತ್ತಿರುವ ವಿದ್ಯಮಾನಗಳ ಅರಿವು ನನಗಿರಲಿಲ್ಲ.
ಹಿಂದಿ ಒಂದು ಸುಂದರ ಭಾಷೆ ಆದರೆ ಅದರಲ್ಲಿ ದೀರ್ಘಸ್ವರಗಳು ಇಲ್ಲದಿರುವುದರಿಂದ ಬರೆಯಲು ಮತ್ತು ಓದಲು ಸಪ್ಪೆ ಎನಿಸುತ್ತದೆ. ಹಾಗೆಯೇ ತಮಿಳಿನಲ್ಲಿ 'ಪ' ಮತ್ತು 'ಬ'ಗೆ ಒಂದೇ ಅಕ್ಷರ ಇರುವುದರಿಂದ (ನನಗೆ ತಿಳಿದಿರುವ ಮಟ್ಟಿಗೆ) ಅದನ್ನು ಪರಿಪೂರ್ಣ ಭಾಷೆ ಎಂದು ಪರಿಗಣಿಸುವುದಿಲ್ಲ.
ಈಗ ಕನ್ನಡಕ್ಕೆ "ಮಹಾಪ್ರಾಣವೇ" ಬೇಡ ಎನ್ನುತ್ತಿರುವವರು ಭಾಷಾ ಸುಧಾರಕರಲ್ಲ, ಅವರು "ಬಾಶಾ ಸುದಾರಕರು"  :) :). ಕನ್ನಡ ಭಾಷೆಯು ಮೂದಲಿಂದಲೂ ಸಂಸ್ಕೃತದ ಆರೈಕೆಯಲ್ಲಿಯೇ ಬೆಳೆದಿದೆ ಎನ್ನುವುದು ಸರ್ವಕಾಲಿಕ ಸತ್ಯ. ಈಗ ಬೆಳೆಸಿದ ತಾಯಿಯೇ ಬೇಡ ಎನ್ನುತ್ತಿರುವುದು ವಿಪರ್ಯಾಸವೂ, ನಾವು ತೋರುವ ಕೃತಘ್ನತೆಯು (ಕ್ರುತಗ್ನತೆಯು ;) ) ಆಗುತ್ತದೆ. ಶೈಕ್ಷಣಿಕ ವಿಚಾರಕ್ಕೆ ಬಂದಾಗಲಂತೂ ನಾವು ಸಂಸ್ಕೃತದ ಸಹಾಯವಿಲ್ಲದೆ ಪಥ್ಯಗಳನ್ನು ರಚಿಸುವುದು ಕಷ್ಟಸಾಧ್ಯ. ಭಾಷೆಯೆಂಬುದು ಯಾರ ಪಿತ್ರಾರ್ಜಿತ ಆಸ್ತಿಯೂ ಅಲ್ಲದ ಕಾರಣ ಮಹಾಪ್ರಾಣ, ಋ, ಷ ಗಳನ್ನು ತೆಗೆಯುವ ಪರ-ವಿರೋಧಿಗಳನ್ನು ಕರೆಯಿಸಿ ಆರೋಗ್ಯಕರವಾದ ಚರ್ಚೆನಡೆದರೆ ಒಳಿತು ಎನ್ನುವುದು ನನ್ನ ವಾದ.
ಜೈ ಕನ್ನಡಾಂಬೆ.

ಇಂದಿನ ಆಳ-ನಿರಾಳ ಲೇಖನದ ನಕಲುಪ್ರತಿಯನ್ನು ಅಂಟಿಸಿರುತ್ತೇನೆ

pathya(text) ಎಂದು ಬರೆಯುವಲ್ಲಿ ತಂತ್ರಜ್ಞಾನ ದೋಷದಿಂದ 'ಪಥ್ಯ' ಎಂದಾಗಿದೆ ಕ್ಷಮೆಯಿರಲಿ.

ವಂದನೆಗಳೊಂದಿಗೆ
ನಾಗರಾಜ ಸಾಠೆ
ಹಾರಗದ್ದೆ, ಬೆಂಗಳೂರು

Thursday, June 3, 2010

VIT2009.wmv


 Hello all,
This is the video of line follower robotic event at an international level tecnical fest  held at VIT vellore in the year 2009 in which our team had taken part and won first place

Sunday, March 21, 2010

ನವ ಭಾರತ ನಿರ್ಮಾಣ: ಒಂದು ಚಿಂತನೆ

ಇತ್ತೀಚಿಗೆ,ಎರಡನೇ ತರಗತಿಯಲ್ಲಿ(ಆಂಗ್ಲ ಮಾಧ್ಯಮದಲ್ಲಿ) ಓದುತ್ತಿರುವ ಪುಟ್ಟ ಹುಡುಗಿಯ ಕನ್ನಡ ಜ್ಞಾನವನ್ನು ಕಂಡು ನಮಗಿರುವ ಇಂಗ್ಲೀಷ್ ವ್ಯಾಮೋಹದ ಪರಿಣಾಮಗಳ ದರ್ಶನವಾಗಿ ನಡುಕ ಹುಟ್ಟಿತು. ಇದು ಕೇವಲ ಒಂದು ಮಗುವಿನ ಕಥೆಯಲ್ಲ ಕರ್ನಾಟಕದ ಅಥವಾ ಭಾರತದ ಯಾವುದೇ ಮಹಾನಗರಗಳಲ್ಲಿ ಓದುತ್ತಿರುವ ಶೇಕಡಾ 80 ಮಕ್ಕಳ ಮಾತೃಭಾಷಾ ಜ್ಞಾನ ಅದೇ ಮಟ್ಟದಲ್ಲಿ ಇರುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಇಂದು ಎಲ್ಲ ಪೋಷಕರ ತಲೆಯಲ್ಲಿ ಇಂಗ್ಲೀಷ್ ಎಂಬ ಹುಳು ಹೊಕ್ಕಿ ಬಿಟ್ಟಿದೆ. ಮಗು ಹುಟ್ಟುತ್ತಲೇ ಇಂಗ್ಲಿಷ್ ರೈಮ್ಸ್ ಗಳನ್ನು ಅವರ ಮುಗ್ಧ ಮನಸ್ಸಿನೊಳಗೆ ತುರುಕುತ್ತಾರೆ. ಹಿಂದೆ ತಿಥಿ,ವಾರ,ನಕ್ಷತ್ರ,ಸಂವತ್ಸರಗಳ ಹೆಸರುಗಳನ್ನು ಕಂಠ ಪಾಠ ಮಾಡಿಸುವ ಕ್ರಮವಿತ್ತು ಈಗ ಅವುಗಳ ಜಾಗವನ್ನು ಸಂಡೇ ಮಂಡೆಗಳು ಜನವರಿ,ಫೆಬ್ರವರಿಗಳು ಆಕ್ರಮಿಸಿವೆ. ಮಗು ಇಂಗ್ಲಿಷಿನಲ್ಲಿ ಮಾತನಾಡುವುದೇ ಪ್ರತಿಷ್ಠೆಯೆಂದು ಭಾವಿಸಿ "ಇಂಟರ್ನಾಷನಲ್ ಶಾಲೆಗಳಿಗೆ" ಸೇರಿಸುವ ಧಾವಂತವಂತೂ ತೀರಾ ಸಾಮಾನ್ಯ.
ಇನ್ನು ನಮ್ಮ ನೆರೆ ರಾಷ್ಟ್ರವಾದ ಚೀನಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದೆ. ಇನ್ನು ಕೇವಲ "ಎರಡು ದಶಕಗಳಲ್ಲಿ ಚೀನಾ ಜಗತ್ತಿನ ಮೇಲೆ ತನ್ನ ಪ್ರಾಬಲ್ಯ ಸಾಧಿಸುತ್ತದೆ!!" ಎಂಬುದು ನನ್ನ ಊಹೆ. ನನಗಿರುವ ತಿಳುವಳಿಕೆಯ ಪ್ರಕಾರ ಚೀನಿಯರ ಪ್ರಬಲ ಅಸ್ತ್ರವೆಂದರೆ "ಭಾಷೆಯೇ ಹೊರತು ಇನ್ಯಾವ ಅಣ್ವಸ್ತ್ರವೂ ಅಲ್ಲ"ಅಥವಾ ನಕಲಿ ಉತ್ಪನ್ನಗಳೂ ಅಲ್ಲ. ಚೀನಿಯರನ್ನು ನಾನು ಗೌರವಿಸುವುದು ಆ ಕಾರಣಕ್ಕಾಗಿಯೇ. ಅವರು ಎಂದೂ ತಮ್ಮ ಭಾಷೆಯನ್ನು ಬಿಟ್ಟುಕೊಟ್ಟು ಇಂಗ್ಲೀಷ್ ವ್ಯಾಮೋಹಕ್ಕೆ ಬಲಿಯಾದವರಲ್ಲ. ಈ ವಿಷಯದಲ್ಲಿ ಜಪಾನೀಯರೂ ಹಿಂದಿಲ್ಲ.
ಆದರೆ ಭಾರತೀಯರ ಬುದ್ಧಿ,ಸಾಮರ್ಥ್ಯ,ಶಕ್ತಿಗಳೆಲ್ಲವು ಪಾಶ್ಚಾತ್ಯ ದೇಶಗಳ ಪಾಲಾಗುತ್ತಿರುವುದು ಖೇದಕರ. ಇದಕ್ಕೆ ಒಂದೇ ಕಾರಣ ಭಾರತೀಯರ ಅನ್ಯಭಾಷೆಗಳ ಮೇಲಿನ ಪ್ರೀತಿ (ಉದಾಹರಣೆಗೆ: ಸುಮಾರು ೪-೫ ವರ್ಷಗಳಿಂದ ಬೆಂಗಳೂರಿನಲ್ಲಿರುವ ಉತ್ತರಭಾರತೀಯನೊಬ್ಬ ಕನ್ನಡ ಕಲಿಯುವ ಗೋಜಿಗೆ ಹೋಗದಿದ್ದರೂ ಸಹ, ಕೇವಲ ೧ ವರ್ಷದಲ್ಲಿ ಫ್ರೆಂಚ್ ಅಥವಾ ಗೆರ್ಮನ್ ಭಾಷೆಯನ್ನು ಕಲಿತು ಪರದೇಶಕ್ಕೆ ಹಾರುತ್ತಾನೆ). ಹಣದ ವ್ಯಾಮೋಹಕ್ಕೊಳಗಾಗಿ ಭಾರತೀಯರು ಯಾವ ದೇಶದಲ್ಲಿ ಬೇಕಾದರೂ ದುಡಿಯುತ್ತಾರೆ ಅಲ್ಲಿನ ಭಾಷೆ ಸಂಸ್ಕೃತಿಗಳನ್ನು ಕಲಿಯುತ್ತಾರೆ( ಇದು ಭಾರತೀಯರ ದೊಡ್ದತನವೂ ಹೌದು!! ಏಕೆಂದರೆ ಜಗತ್ತಿನ ಬೇರೆ ಯಾವುದೇ ದೇಶದ ಜನರಲ್ಲಿ ಪರಿಸ್ಥಿತಿಗೆ ಒಗ್ಗುವ ಗುಣಗಳಿಲ್ಲ), ಅನಾದಿ ಕಾಲದಿಂದ ಬಂದ ಸಂಸ್ಕೃತಿ ಸಂಪ್ರದಾಯಗಳನ್ನು ತೀರಾ ಸಾಧಾರಣವೆಂಬಂತೆ ಮರೆಯುತ್ತಾರೆ.
ಪಾಶ್ಚಾತ್ಯರು ಪ್ರಾಣಿಗಳಂತೆ ಕಾಡಿನಲ್ಲಿ ಅಲೆದು ವಾಸಿಸುತ್ತಿರುವಾಗಲೇ, ಖಗೋಳಶಾಸ್ತ್ರ, ರಸಾಯನಶಾಸ್ತ್ರ,ಗಣಿತಗಳಲ್ಲಿ ಮಹತ್ತರವಾದ ಸಂಶೋಧನೆಗಳನ್ನು ಮಾಡಿದ ಸಂತತಿಯವರಾದ ಭಾರತೀಯರಿಗೆ ಈ ಗತಿ ಬರಬಾರದಿತ್ತು. ಇಷ್ಟೆಲ್ಲಾ ಸಾಮರ್ಥ್ಯಗಳನ್ನು ಹೊಂದಿರುವ ನಾವು ಕೆಲಸಗಳನ್ನರಸಿ ಪರದೇಶಗಳಿಗೆ ಏಕೆ ಹೋಗಬೇಕು? ಅಥವಾ ಭಾರತದಲ್ಲಿಯೇ ಇದ್ದುಕೊಂಡು ವಿದೇಶಿ ಉದ್ದಿಮೆಗಳಿಗೆ ನಾವೇಕೆ ಕೆಲಸಮಾಡಬೇಕು? ಇದರಿಂದ ಉತ್ತಮ ಆದಾಯ ಗಳಿಸಬಹುದು ಎಂಬುದು ಒಪ್ಪಿಕೊಳ್ಳಲೇ ಬೇಕಾದ ಅಂಶವಾದರೂ ಇದರಿಂದ ನಮ್ಮ ಸಾಮರ್ಥ್ಯ ಬುದ್ಧಿವಂತಿಕೆಯೆಲ್ಲ ಪರಕೀಯರ ಪಾಲಾಗುವುದಿಲ್ಲವೇ? ಹೀಗೆ ಯೋಚಿಸಿದ್ದಲ್ಲಿ ನಾವು ಸ್ವತಂತ್ರರು ಎಂದೂ ಹೇಳುವುದಕ್ಕೂ ಹಿಂಜರಿಯಬೇಕಾಗುತ್ತದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವೇ ಮಾಡಬೇಕಾಗಬಹುದು.
ಇದಕ್ಕೆ ಸಮರ್ಪಕ ಉತ್ತರವೆಂದರೆ ದೇಶದಲ್ಲಿ ಭಾಷಾಕ್ರಾಂತಿ ಆಗಬೇಕಿದೆ. ಮೊದಲು ನಾವು ರಾಷ್ಟ್ರೀಯ ಭಾಷೆಯೊಂದನ್ನು ಸರ್ವಾನುಮತದಿಂದ ಆಯ್ಕೆ ಮಾಡಬೇಕಾದುದು ಮೊದಲ ಕೆಲಸ. ನಂತರ ಆಯಾ ಭಾಷಾವಾರು ಪ್ರಾಂತ್ಯಗಳಲ್ಲಿ ಆ ಭಾಷೆಯ ಹಾಗು ರಾಷ್ಟ್ರಭಾಷೆಯ ಮಾಧ್ಯಮದಲ್ಲಿ ಮಾತ್ರ ಶಿಕ್ಷಣ ನೀಡುವಂತೆ ಮಾಡಬೇಕು (ಬೇಕಿದ್ದಲ್ಲಿ ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿಯಲು ಅವಕಾಶ ಕೊಡಬಹುದು). ಈ ದಿಸೆಯಲ್ಲಿ ಎಲ್ಲ ವಿಜ್ಞಾನ ಹಾಗು ತಂತ್ರಜ್ಞಾನ,ವ್ಯವಹಾರ, ಬ್ಯಾಂಕಿಂಗ್, ಕಾನೂನು ಮತ್ತು ಆಡಳಿತಕ್ಕೆ ಸಂಬಧಪಟ್ಟ ಎಲ್ಲ ಬರಹಗಳನ್ನು, ಕಡತಗಳನ್ನು ಆಯಾ ರಾಜ್ಯಗಳ ಭಾಷೆಗಳಿಗೆ ತರ್ಜುಮೆ ಮಾಡುವ ಕೆಲಸ ಮಹತ್ತರವಾದುದು. ಯುವಕರಿಗೆ ಹಾಗು ಅನುಭವಿಗಳಿಗೆ ಪ್ರಾಶಸ್ತ್ಯ ನೀಡಿ ಹೊಸ ಉದ್ದಿಮೆಗಳನ್ನು ಸ್ಥಾಪಿಸಿ ಅದರಿಂದ ವಿಪುಲ ಉದ್ಯೋಗವಕಾಶಗಳನ್ನು ಸೃಷ್ಟಿಸಬಹುದು. ನವ ಭಾರತ ನಿರ್ಮಾಣ ಮಾಡಬಹುದು. ವಿದೇಶೀಯರು ಬೇಕಿದ್ದಲ್ಲಿ ಭಾರತೀಯ ಭಾಷೆಯನ್ನು ಕಲಿತು ಇಲ್ಲಿ ಕೆಲಸ ಮಾಡಬಹುದು (ಉದಾ: ಕರ್ನಾಟಕದಲ್ಲಿ ಕೆಲಸ ಮಾಡಬೇಕಿದ್ದಲ್ಲಿ ಕನ್ನಡ ಕಲಿಯಬೇಕು ಅಥವಾ ತಮಿಳು ನಾಡಿನಲ್ಲಿ ಕೆಲಸ ಮಾಡಬೇಕಿದ್ದಲ್ಲಿ ತಮಿಳು ಕಲಿಯಬೇಕು). ಆದರೆ ಭಾರತೀಯರು ರಾಷ್ಟ್ರಭಾಷಾ ಮಾಧ್ಯಮದಲ್ಲಿ ಕಲಿತಿರುತ್ತಾದರಿಂದ ಅವರು ಎಲ್ಲಿ ಬೇಕಾದರೂ ಕೆಲಸ ಮಾಡುವ ಅವಕಾಶ ಕಲ್ಪಿಸಬಹುದು. ಭಾರತವನ್ನು ಜಗತ್ತಿನ ಉತ್ತುಂಗಕ್ಕೇರಿಸಬಹುದು.
ಜೈ ಹಿಂದ್.


(ವಿ.ಸೂ.: ಈ ಯೋಚನೆ ತೀರಾ ಬಾಲಿಶವೆನಿಸಬಹುದು ಅಥವಾ ಯಾವುದೊ ಉತ್ತಮ ಸಿನಿಮಾ ಕಥೆಯೆಂದೂ ಅಭಿಪ್ರಾಯ ಬರಬಹುದು. ಆದರೆ ಇದೊಂದು ಜವಾಬ್ದಾರಿಯುತ ಭಾರತೀಯ ಪ್ರಜೆಯ ಚಿಂತನೆ.ಇದನ್ನು ವಾಸ್ತವಕ್ಕೆ ತಂದಲ್ಲಿ ಹೊಸ ಯುಗಕ್ಕೊಂದು ನಾಂದಿ ಹಾಡಬಹುದು. ಯುವಕರು,ಪೋಷಕರು ಮತ್ತು ರಾಜಕಾರಣಿಗಳು ಓದಲೇಬೇಕಾದಂತಹ ಲೇಖನವಿದು.
ನಿಮ್ಮ ಚಿಂತನೆಗಳು ಹಾಗು ಅಭಿಪ್ರಾಯಗಳನ್ನು ಇಲ್ಲಿ ಚರ್ಚಿಸಬಹುದು ಅಥವಾ ಕೆಳಕಂಡ ವಿಳಾಸಕ್ಕೆ ಈ-ಅಂಚೆಯನ್ನು ಕಳುಹಿಸಬಹುದು
sathe.8901@gmail.com )