Friday, June 4, 2010

04/06/2010 vijaya karnataka ala-nirala lekhanada vimarshe

 ನಮಸ್ಕಾರ,
ಇಂದಿನ ಆಳ-ನಿರಾಳ ಲೇಖನವು ಆಳವಾಗಿಯೂ, ಹಾಗು ಸ್ವಲ್ಪ ನಿರಾಳವನ್ನೂ ತಂದಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ನನಗೂ ಸಹ ನಿಮ್ಮಂತೆಯೇ ಅನಿಸಿಕೆಗಳು ಇರುವುದರಿಂದ ಈ ಲೇಖನ ನನಗೆ ಬಹಳ ಹತ್ತಿರವಾಯಿತು. ಇಂದಿನ ಲೇಖನದಿಂದ ಸ್ವಲ್ಪ ಆಘಾತವು ಆಗಿದೆ ಏಕೆಂದರೆ ಮಹಾಪ್ರಾಣಗಳನ್ನು,ಋ ಮತ್ತು ಷ ಕಾರಗಳನ್ನು  ಕನ್ನಡದಿಂದ ತೆಗೆಯಲು ನಡೆಯುತ್ತಿರುವ ವಿದ್ಯಮಾನಗಳ ಅರಿವು ನನಗಿರಲಿಲ್ಲ.
ಹಿಂದಿ ಒಂದು ಸುಂದರ ಭಾಷೆ ಆದರೆ ಅದರಲ್ಲಿ ದೀರ್ಘಸ್ವರಗಳು ಇಲ್ಲದಿರುವುದರಿಂದ ಬರೆಯಲು ಮತ್ತು ಓದಲು ಸಪ್ಪೆ ಎನಿಸುತ್ತದೆ. ಹಾಗೆಯೇ ತಮಿಳಿನಲ್ಲಿ 'ಪ' ಮತ್ತು 'ಬ'ಗೆ ಒಂದೇ ಅಕ್ಷರ ಇರುವುದರಿಂದ (ನನಗೆ ತಿಳಿದಿರುವ ಮಟ್ಟಿಗೆ) ಅದನ್ನು ಪರಿಪೂರ್ಣ ಭಾಷೆ ಎಂದು ಪರಿಗಣಿಸುವುದಿಲ್ಲ.
ಈಗ ಕನ್ನಡಕ್ಕೆ "ಮಹಾಪ್ರಾಣವೇ" ಬೇಡ ಎನ್ನುತ್ತಿರುವವರು ಭಾಷಾ ಸುಧಾರಕರಲ್ಲ, ಅವರು "ಬಾಶಾ ಸುದಾರಕರು"  :) :). ಕನ್ನಡ ಭಾಷೆಯು ಮೂದಲಿಂದಲೂ ಸಂಸ್ಕೃತದ ಆರೈಕೆಯಲ್ಲಿಯೇ ಬೆಳೆದಿದೆ ಎನ್ನುವುದು ಸರ್ವಕಾಲಿಕ ಸತ್ಯ. ಈಗ ಬೆಳೆಸಿದ ತಾಯಿಯೇ ಬೇಡ ಎನ್ನುತ್ತಿರುವುದು ವಿಪರ್ಯಾಸವೂ, ನಾವು ತೋರುವ ಕೃತಘ್ನತೆಯು (ಕ್ರುತಗ್ನತೆಯು ;) ) ಆಗುತ್ತದೆ. ಶೈಕ್ಷಣಿಕ ವಿಚಾರಕ್ಕೆ ಬಂದಾಗಲಂತೂ ನಾವು ಸಂಸ್ಕೃತದ ಸಹಾಯವಿಲ್ಲದೆ ಪಥ್ಯಗಳನ್ನು ರಚಿಸುವುದು ಕಷ್ಟಸಾಧ್ಯ. ಭಾಷೆಯೆಂಬುದು ಯಾರ ಪಿತ್ರಾರ್ಜಿತ ಆಸ್ತಿಯೂ ಅಲ್ಲದ ಕಾರಣ ಮಹಾಪ್ರಾಣ, ಋ, ಷ ಗಳನ್ನು ತೆಗೆಯುವ ಪರ-ವಿರೋಧಿಗಳನ್ನು ಕರೆಯಿಸಿ ಆರೋಗ್ಯಕರವಾದ ಚರ್ಚೆನಡೆದರೆ ಒಳಿತು ಎನ್ನುವುದು ನನ್ನ ವಾದ.
ಜೈ ಕನ್ನಡಾಂಬೆ.

ಇಂದಿನ ಆಳ-ನಿರಾಳ ಲೇಖನದ ನಕಲುಪ್ರತಿಯನ್ನು ಅಂಟಿಸಿರುತ್ತೇನೆ

pathya(text) ಎಂದು ಬರೆಯುವಲ್ಲಿ ತಂತ್ರಜ್ಞಾನ ದೋಷದಿಂದ 'ಪಥ್ಯ' ಎಂದಾಗಿದೆ ಕ್ಷಮೆಯಿರಲಿ.

ವಂದನೆಗಳೊಂದಿಗೆ
ನಾಗರಾಜ ಸಾಠೆ
ಹಾರಗದ್ದೆ, ಬೆಂಗಳೂರು

Thursday, June 3, 2010

VIT2009.wmv


 Hello all,
This is the video of line follower robotic event at an international level tecnical fest  held at VIT vellore in the year 2009 in which our team had taken part and won first place